ಎಥಿಲೀನ್ ಡೈಕ್ಲೋರೈಡ್ ಒಂದು ಸಾವಯವ ಸಂಯುಕ್ತ. ಇದರ ರಚನಾ ಸೂತ್ರ CICH2-CH2CI. ಇದಕ್ಕೆ ಎಥಿಲೀನ್ ಕ್ಲೋರೈಡ್ ಎಂಬ ಹೆಸರೂ ಇದೆ. == ತಯಾರಿಕೆ == ಎಥಿಲೀನ್ ಮತ್ತು ಕ್ಲೋರಿನುಗಳ ನೇರ ಸಂಯೋಗದಿಂದ ಇದನ್ನು ತಯಾರಿಸುತ್ತಾರೆ. ಎರಡು ಅನಿಲಗಳನ್ನೂ ಸರಿಯಾದ ಪ್ರಮಾಣದಲ್ಲಿ ಬೆರೆಸಿ, ಮಿಶ್ರಣವನ್ನು ೮೦೦-೧೦೦೦ ಸೆಂ. ಗ್ರೇ. ಉಷ್ಣತೆಗೆ ಕಾಯಿಸಿದ ತಾಮ್ರ, ಕಬ್ಬಿಣ ಅಥವಾ ಜಲರಹಿತ ಕ್ಯಾಲ್ಸಿಯಂ ಕ್ಲೋರೈಡಿನ ಮೇಲೆ ಹಾಯಿಸಿದರೆ ಎಥಿಲೀನ್ ಡೈಕ್ಲೋರೈಡ್ ಉತ್ಪತ್ತಿಯಾಗುತ್ತದೆ. C2H4 + CI2 → C2H4CI2 ಸೂಕ್ತವಾದ ಕ್ಲೋರಿನೀಕರಿಸಿದ ಒಂದು ಹೈಡ್ರೊಕಾರ್ಬನ್ನನ್ನು ದ್ರಾವಕವಾಗಿ ಉಪಯೋಗಿಸುವುದಾದರೆ ದ್ರಾವಣದಲ್ಲಿ ೪೦೦ ಸೆಂ. ಗ್ರೇ. ಉಷ್ಣತೆಯಲ್ಲಿಯೇ ಈ ಕ್ರಿಯೆಯನ್ನು ಆಗಮಾಡಬಹುದು. == ಗುಣಗಳು == ಎಥಿಲೀನ್ ಡೈಕ್ಲೋರೈಡ್ ಬಣ್ಣವಿಲ್ಲದ ದ್ರವಪದಾರ್ಥ. ಇದರ ಕುದಿಬಿಂದು ೮೪೦ ಸೆಂ. ಗ್ರೇ. ಇದು ಒಳ್ಳೆಯ ದ್ರಾವಕ (ಸಾಲ್ವೆಂಟ್). == ಉಪಯೋಗಗಳು == ಒಣ ಒಗೆತಕ್ಕೆ ಅಂದರೆ ಜಲರಹಿತಮಾರ್ಜನಕ್ಕೆ (ಡ್ರೈಕ್ಲೀನಿಂಗ್) ಇದನ್ನು ಬಳಸುತ್ತಾರೆ. ಮೋಟಾರು ವಾಹನಗಳ ಎಂಜಿನ್ನುಗಳಲ್ಲಿ ಆಗುವ ಕುಕ್ಕಾಟವನ್ನು (ನಾಕಿಂಗ್) ತಪ್ಪಿಸುವುದಕ್ಕಾಗಿ ಪೆಟ್ರೋಲಿಗೆ ಬೆರೆಸುವ ಈಥೈಲ್ ಫ್ಲೂಯ್ಡಿನಲ್ಲಿ ಸಾಮಾನ್ಯವಾಗಿ ೧೦% ಎಥಿಲೀನ್ ಡೈಕ್ಲೋರೈಡ್ ಇರುತ್ತದೆ. ಅಲ್ಲದೆ ಪ್ಲಾಸ್ಟಿಕ್ಕುಗಳ ತಯಾರಿಕೆಯಲ್ಲಿ ಬಳಸುವ ವೀನೈಲ್ ಕ್ಲೋರೈಡ್ (CH2-), ಥಯೊಕಾಲ್-ಎ ಎಂಬ ಕೃತಕ ರಬ್ಬರ್, ಎಥಿಲೀನ್ ಡಯಮೀನ್ (H2N.CH2-CH2.NH2) ಇವನ್ನು ಎಥಿಲೀನ್ ಡೈಕ್ಲೋರೈಡಿನಿಂದ ತಯಾರಿಸುತ್ತಾರೆ. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == – 1,2 , -450/4-84-007d, 1984